ಮೂಲಭೂತ ಸೌಕರ್ಯಗಳು

ಸಂಸ್ಥೆಯು 6 ಸುಸಜ್ಜಿತ ತರಬೇತಿ ಕೊಠಡಿಗಳು, ಗ್ರಂಥಾಲಯ, ಎರಡು ಕಂಪ್ಯೂಟರ್ ಕೇಂದ್ರಗಳು ಹಾಗೂ ಮಹಾ ನಿರ್ದೇಶಕರು ಮತ್ತು ಬೋಧಕ ವರ್ಗದ ಸಿಬ್ಬಂದಿಯವರನ್ನು ಹೊಂದಿರುವ ಒಂದು ಸಮುಚ್ಚಯವನ್ನು ಹೊಂದಿದೆ. ಸಂಸ್ಥೆಯ ವಸತಿ ನಿಲಯದಲ್ಲಿ ಏಕ ಕಾಲಕ್ಕೆ 100 ಮಂದಿ ಅಧಿಕಾರಿಗಳು ತಂಗುವ ವ್ಯವಸ್ಥೆ ಇದೆ. ಆವರಣದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಒಂದು ಶಾಖೆ, ಔಷಧಾಲಯ ಹಾಗೂ ಅಂಚೆ ಕಚೇರಿಯ ವ್ಯವಸ್ಥೆಯು ಇದೆ. ಅಲ್ಲದೆ ಸಾಕಷ್ಟು ಸಂಖ್ಯೆಯ ಮಲ್ಟಿಮೀಡಿಯಾ ಪ್ರೊಜೆಕ್ಟರುಗಳು, ಸ್ಲೈಡ್ ಪ್ರೊಜೆಕ್ಟರುಗಳು, ಟಿ.ವಿ., ಪಿ.ಸಿ.ಆರ್. ಮುಂತಾದ ದೃಕ್-ಶ್ರವಣ ಸಾಧನಗಳನ್ನು ಹೊಂದಿದೆ. ಅಲ್ಲದೆ ಸಂಸ್ಥೆಯ ಬಹು ಪ್ರತಿ ವಿಭಾಗದಲ್ಲಿ ತರಬೇತಿಗಾರರಿಗೆ ನೀಡುವ ವಿವಿಧ ಪಠ್ಯವಸ್ತುಗಳ ಪ್ರತಿ ತೆಗೆಯುವ ವ್ಯವಸ್ಥೆ ಇದೆ. 

ಆಡಳಿತ ಕಛೇರಿ:

ಸಂಸ್ಥೆಯ ಆಡಳಿತ ಕಛೇರಿಯು 1780.00 ಚ.ಮೀ. ವಿಸ್ತಿರ್ಣದಲ್ಲಿದ್ದು, ಮೂರು ಅಂತಸ್ತುಗಳನ್ನು ಹೊಂದಿದೆ. ನೆಲ ಅಂತಸ್ತಿನಲ್ಲಿ ನಿರ್ದೇಶಕರ ಕೊಠಡಿ, 03 ಬೋಧಕರ ಕೊಠಡಿ, ಕಛೇರಿ ಸಿಬ್ಬಂದಿ ಕೊಠಡಿ ಒಳಗೊಂಡಂತೆ ಗಣಕಯಂತ್ರ ಕೊಠಡಿ ಇರುತ್ತದೆ. ಮೊದಲ ಮಹಡಿಯಲ್ಲಿ, ಮಹಾ ನಿರ್ದೇಶಕರ ಕೊಠಡಿ, 04 ಬೋಧಕರ ಕೊಠಡಿ, ವಾಚನಾಲಯ ಮತ್ತು 30 ಜನರು ಆಸೀನರಾಗುವ ಸಭಾ ಭವನ ಇರುತ್ತದೆ. ಎರಡನೆ ಮಹಡಿಯಲ್ಲಿ 09 ಬೋಧಕರ ಕೊಠಡಿ, ದಾಖಲೆ ಕೊಠಡಿ ಇರುತ್ತದೆ.

ವಸತಿ ನಿಲಯ:
 

ಸಂಸ್ಥೆಯ ನೇತ್ರಾವತಿ ವಸತಿ ನಿಲಯವು 8200.00 ಚ.ಮೀ. ವಿಸ್ತೀರ್ಣದಲ್ಲಿ ವ್ಯಾಪಿಸಿದ್ದು, ನೆಲಮಾಳಿಗೆ ಹಾಗೂ 4 ಅಂತಸ್ತುಗಳನ್ನು ಹೊಂದಿದೆ. ನೆಲಮಾಳಿಗೆಯಲ್ಲಿ ಅಡುಗೆಮನೆ, 250 ಜನರು ಸೇವಿಸುವ ಊಟದ ಮನೆ ಹಾಗೂ ಕಾರು ಪಾರ್ಕಿಂಗ್ ಸೌಲಭ್ಯವಿರುತ್ತದೆ. ನೆಲಮಹಡಿಯಲ್ಲಿ 14 ಕೋಣೆಗಳಿದ್ದು, ಉಳಿದ ಮೂರು ಅಂತಸ್ತುಗಳಲ್ಲಿ 30 ಕೋಣೆಗಳಿರುತ್ತದೆ. ವಸತಿ ನಿಲಯದಲ್ಲಿ ಸುಸಜ್ಜಿತ 02 ಸಭಾಂಗಣ ಹಾಗೂ 02 ತರಬೇತಿ ಕೊಠಡಿಗಳಿರುತ್ತದೆ.

ಗಣಕಯಂತ್ರ ವ್ಯವಸ್ಥೆ:

ಸಂಸ್ಥೆಯು 200ಕ್ಕೂ ಅಧಿಕ ಪ್ರಚಲಿತ ಗಣಕಯಂತ್ರಗಳನ್ನು ಹೊಂದಿರುತ್ತದೆ. ಸಂಸ್ಥೆಯಲ್ಲಿ 30 ಗಣಕಯಂತ್ರಗಳುಳ್ಳ ಕೊಠಡಿಯು ಕಾರ್ಯನಿರ್ವಹಿಸುತ್ತಿದೆ. ಎಲ್ಲಾ ಗಣಕ ಯಂತ್ರಗಳಿಗೂ ಅಂತರ್ಜಾಲ ಸಂಪರ್ಕವಿರುತ್ತದೆ. ತರಬೇತಿ ಸಭಾಂಗಣ ಹಾಗೂ ಇತರೆ ತರಬೇತಿ ಸ್ಥಳಗಳಲ್ಲಿ ಮಲ್ಟಿಮೀಡಿಯಾ ಪ್ರೋಜೆಕ್ಟರ್ ವ್ಯವಸ್ಥೆ ಇರುತ್ತದೆ.

ಗ್ರಂಥಾಲಯ :

ಸಂಸ್ಥೆಯ ಗ್ರಂಥಾಲಯದಲ್ಲಿ ಸಾಕಷ್ಟು ಉತ್ತಮ ಸಂಖ್ಯೆಯ ಹಳೆಯದಾದ ಮತ್ತು ಇತ್ತೀಚಿನ ಪುಸ್ತಕಗಳು ಇವೆ. ಉಲ್ಲೇಖಕ್ಕೆ ಬೇಕಾಗುವ ಮ್ಯಾನುಯಲ್ಗಳು, ಜರ್ನಲ್ಗಳು ಮತ್ತು ನಿಯತಕಾಲಿಕೆಗಳು ಇದ್ದು ವಿಜ್ಞಾನ, ಸಾಮಾನ್ಯ ಆಡಳಿತ, ವ್ಯವಸ್ಥಾಪನೆ, ಗ್ರಾಮೀಣ ಅಭಿವೃದ್ಧಿ, ಆರ್ಥ ಶಾಸ್ತ್ರ, ಕಂಪ್ಯೂಟರ್ ಅವಶ್ಯಕತೆ ಮುಂತಾದ ಹಲವಾರು ವಿವಿಧ ವಿಷಯಗಳ ಪುಸ್ತಕಗಳನ್ನು ಒಳಗೊಂಡಿದೆ. ಅಲ್ಲದೆ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಸಂಸ್ಥೆಗಳಿಂದ ವಾರ್ಷಿಕ ವಾರ್ತಾಪತ್ರಿಕೆಗಳನ್ನು ಸಂಸ್ಥೆಯ ಗ್ರಂಥಾಲಯಕ್ಕೆ ತರಿಸಲಾಗುತ್ತಿದೆ. ಸಂಸ್ಥೆಯ ಗ್ರಂಥಾಲಯ ವ್ಯವಸ್ಥೆಯನ್ನು ಕಂಪ್ಯೂಟರೀಕರಣಗೊಳಿಸಲಾಗುತ್ತಿದ್ದು 50,000 ಕ್ಕೂ ಹೆಚ್ಚು ಪುಸ್ತಕಗಳ / ನಿಯತಕಾಲಿಕಗಳ ವಿವರಗಳನ್ನು ಕಂಪ್ಯೂಟರಿನಲ್ಲಿ ಅಳವಡಿಸಲಾಗಿದೆ. ಅಲ್ಲದೆ ಮ್ಯಾನುಯಲ್ ಇಂಡೆಕ್ಸಿಂಗ್ ವ್ಯವಸ್ಥೆ ಸಹಾ ಕಲ್ಪಿಸಲಾಗಿದೆ.

See more on Campus Gallery.