Dir

    ರಾಜ್ಯ ನಗರಾಭಿವೃದ್ಧಿ ಸಂಸ್ಥೆ, ಮೈಸೂರು ಸಮಗ್ರ ನಗರಗಳ ಅಭಿವೃದ್ಧಿಯ ಪರಿಕಲ್ಪನೆಯ ದೃಷ್ಟಿಯನ್ನು ಇಟ್ಟಕೊಂಡು 1999 ರಲ್ಲಿ ಮೈಸೂರಿನಲ್ಲಿ ಸ್ಥಾಪಿಸಲ್ಪಟ್ಟಿದೆ. ರಾಜ್ಯ ನಗರಾಬಿವೃದ್ಧಿ ಸಂಸ್ಥೆಯು ನಗರಾಭಿವೃದ್ಧಿ ಚಟುವಟಿಕೆಗಳಲ್ಲಿ ಸಾಮಥ್ರ್ಯಾಭಿವೃದ್ಧಿ ತರಬೇತಿ, ಸಂಶೋಧನೆ ಹಾಗೂ ಸಲಹಾ ಸಂಸ್ಥೆಯಾಗಿ ಆಡಳಿತ ತರಬೇತಿ ಸಂಸ್ಥೆಯ ಆವರಣದಲ್ಲಿ ಆಡಳಿತ ತರಬೇತಿ ಸಂಸ್ಥೆಯ ಸಹೋದರ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಸುಂದರ ಹಾಗೂ ಸುಸಜ್ಜಿತ ಮೂಲಭೂತಸೌಕರ್ಯಗಳನ್ನು ಹೊಂದಿದ್ದು 200 ರಷ್ಟು ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ನೀಡುವ ವ್ಯವಸ್ಥೆಯನ್ನು ಹೊಂದಿದೆ. ತರಬೇತಿಗಾಗಿ ವಸತಿನಿಲಯ ಹಾಗೂ ಆಡಳಿತ ಭವನದಲ್ಲಿ ಒಟ್ಟು ಐದು ತರಬೇತಿ ಕೊಠಡಿಗಳು, ಒಂದು ಸಮ್ಮೇಳನ ಕೊಠಡಿ ಹಾಗೂ ಒಂದು ಗಣಕಯಂತ್ರದ ಕೊಠಡಿಯನ್ನು ಹೊಂದಿರುತ್ತದೆ.
    ರಾಜ್ಯ ನಗರಾಭಿವೃದ್ಧಿ ಸಂಸ್ಥೆಯು ತರಬೇತಿಗಳನ್ನು ನಿರ್ವಹಿಸಲು ರಾಜ್ಯ ನಗರಾಭಿವೃದ್ಧಿ ಇಲಾಖೆ, ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ ಯೋಜನೆಗಳಿಂದ ಹಣಕಾಸಿನ ನೆರವನ್ನು ಪಡೆಯುತ್ತದೆ. ನಗರಾಭಿವೃದ್ಧಿಗೆ ಸಂಬಂಧಿಸಿದ ವಿಷಯಗಳಲ್ಲಿ ಇತರ ಇಲಾಖೆಗಳ ಪ್ರಶಿಕ್ಷಣಾರ್ಥಿಗಳಿಗೂ ತರಬೇತಿ ನೀಡಲಾಗುತ್ತದೆ. 
    ಈ ಜಾಲತಾಣವು ಸಂಸ್ಥೆಯ ವಿವಿಧ ಕಾರ್ಯ ಚಟುವಟಿಕೆಗಳನ್ನು, ಸಂಸ್ಥೆಯ ಸಾಧನೆಗಳನ್ನು ಪ್ರಸ್ತುತವಾಗಿ ಆಯ್ಕೆಮಾಡಿಕೊಂಡ ವಿವಿಧ ತರಬೇತಿ ಕಾರ್ಯಕ್ರಮಗಳ ವಿವರ, ಪ್ರತಿದಿನದ ಉಪನ್ಯಾಸಗಳು, ಮಾಡ್ಯುಲ್‍ಗಳನ್ನು ಹಾಗೂ ಪ್ರಶಿಕ್ಷಣಾರ್ಥಿಗಳ ಮೌಲ್ಯಮಾಪನದ ವಿವರವನ್ನು ಹೊಂದಿರುತ್ತದೆ. ಈ ಜಾಲತಾಣದಲ್ಲಿ ಬೇರೆ ಸಂಸ್ಥೆಗಳ ಜಾಲಾತಾಣದೊಂದಿಗೆ (ಆಡಳಿತ ತರಬೇತಿ ಸಂಸ್ಥೆ, ಅಬ್ದುಲ್ ನಜಿûೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ) ಲಿಂಕ್ ಅಳವಡಿಸಲಾಗಿದೆ. 
    ರಾಜ್ಯ ನಗರಾಭಿವೃದ್ಧಿ ಸಂಸ್ಥೆಯು ಸಾಮಥ್ರ್ಯಾಭಿವೃದ್ಧಿ ಹಾಗೂ ಪ್ರಶಿಕ್ಷಣಾರ್ಥಿಗಳ ಸಾಮಥ್ರ್ಯಾಭಿವೃದ್ಧಿಯನ್ನು ಹೆಚ್ಚಿಸುವಲ್ಲಿ ದೃಢ ನಿಲುವನ್ನು ತಾಳಿದೆ. ಸಂಸ್ಥೆಯ ಪ್ರಗತಿಗಾಗಿ ತಮ್ಮ ಸಲಹೆ ಸೂಚನೆಗಳನ್ನು directorsiud@gmail.com ಇ-ಮೇಲ್ ಮೂಲಕ ನೀಡಲು ಕೋರಿದೆ.