ರಾಜ್ಯ ನಗರಾಭಿವೃದ್ಧಿ ಸಂಸ್ಥೆ ಸಮಗ್ರ ನಗರಗಳ ಅಭಿವೃದ್ಧಿಯ ಪರಿಕಲ್ವನೆಯ ದೃಷ್ಠಿಯನ್ನು ಇಟ್ಟುಕೊಂಡು 1999 ರಲ್ಲಿ ಮೈಸೂರಿನಲ್ಲಿ ಸ್ಥಾಪಿಸಲ್ಪಟ್ಟಿದೆ. ರಾಜ್ಯದ ನಗರಗಳ ಅಭಿವೃದ್ಧಿ ಬಗ್ಗೆ ತರಬೇತಿ ನೀಡುವ ನಿಟ್ಟಿನಲ್ಲಿ ಆರಂಭಗೊಂಡ ರಾಷ್ಟ್ರ ಮಟ್ಟದ ಸಂಸ್ಥೆಗಳಲ್ಲಿ ಮೈಸೂರಿನ ರಾಜ್ಯ ನಗರಾಭಿವೃದ್ಧಿ ಸಂಸ್ಥೆಯೂ ಒಂದು. ರಾಷ್ಟ್ರದಲ್ಲಿಯೇ ನಗರದ ಮಟ್ಟಿಗೆ ಸಂಬಂಧಿಸಿದಂತೆ ಉತ್ತಮ ಮಟ್ಟದ ಸೌಲಭ್ಯಗಳನ್ನು ಹೊಂದಿರುವ ಪ್ರಥಮ ಸಂಸ್ಥೆಯಾಗಿ ಗುರುತಿಸಲ್ಪಟ್ಟಿದೆ. ಇದು ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಇಲಾಖೆಯಿಂದ ಸ್ಥಾಪಿಸಲ್ಪಟ್ಟು. ಕರ್ನಾಟಕ ಸಂಘಗಳ ಅಧಿನಿಯಮ 1960 ರ ಅಡಿಯಲ್ಲಿ ನೋಂದಣಿಯಾಗಿದೆ. ನಗರಾಭಿವೃದ್ಧಿ ವಿಷಯಗಳ ನಿರ್ವಹಣೆ ಕುರಿತು ಸಾಮಥ್ರ್ಯಭಿವೃದ್ಧಿಗೊಳಿಸುವ ಮತ್ತು ತರಬೇತಿ ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯತ್ತ ಸಂಸ್ಥೆಯಾಗಿದೆ.
ರಾಜ್ಯ ನಗರಾಭಿವೃದ್ಧಿ ಸಂಸ್ಥೆಯು ಬಹುಮುಖಿ ವಿಷಯಗಳಲ್ಲಿ ವ್ಯಾಪಕ ಸಾಮಥ್ರ್ಯವುಳ್ಳ ತರಬೇತಿ ಸಂಸ್ಥೆಯಾಗಿದ್ದು, ನಗರಾಭಿವೃದ್ಧಿ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವವರಿಗೆ, ಸಾಮಥ್ರ್ಯಾಭಿವೃದ್ಧಿ, ತರಬೇತಿ, ಸಂಶೋಧನೆ ಹಾಗೂ ಸಲಹಾ ಸಂಸ್ಥೆಯಾಗಿ ಸಮರ್ಪಣ ಭಾವದಿಂದ ಕೆಲಸ ನಿರ್ವಹಿಸುತ್ತಿರುವ ರಾಜ್ಯದ ಏಕೈಕ ಸಂಸ್ಥೆಯಾಗಿದೆ.

ಸಂಸ್ಥೆಯು ತನ್ನ ಕಾರ್ಯಚಟುವಟಿಕೆಗಳನ್ನು ಶಿಸ್ತುಬದ್ಧವಾಗಿ ಅನುಷ್ಟಾನಗೊಳಿಸಲು ಕಾರ್ಯಕಾರಿ ಮಂಡಳಿ ಹಾಗೂ ಕಾರ್ಯಕಾರಿ ಸಮಿತಿಯು ನಿರ್ದೇಶನ, ಸೂಚನೆಗಳನ್ನು ಪಾಲಿಸುತ್ತದೆ.

ಧ್ಯೇಯ/ಗುರಿ
ಸಂಸ್ಥೆಯು ನಗರಾಭಿವೃದ್ಧಿಯನ್ನು ರೂಪಿಸುವ ಒಂದು ಉತ್ಕøಷ್ಟ ಸಂಸ್ಥೆಯಾಗಿ ಕಾರ್ಯನಿರ್ವಹಿಸುವ ಪರಿಕಲ್ಪನೆಯನ್ನು ಹೊಂದಿರುತ್ತದೆ
ಪರಿಕಲ್ಪನೆ
•    ನಗರ ಸ್ಥಳೀಯ ಸಂಸ್ಥೆಗಳ ಎಲ್ಲಾ ಹಂತದ ಅಧಿಕಾರಿ/ಸಿಬ್ಬಂಧಿಗಳ ಸಾಮಾಥ್ರ್ಯಭಿವೃದ್ಧಿಪಡಿಸುವುದು
•    ಕ್ರಿಯಾ ಯೋಜನೆ, ಉತ್ತಮ ನಡವಳಿಗಳ ದಾಖಲೀಕರಣದ ಮೂಲಕ ಸೂಕ್ತ ತರಬೇತಿ ರೂಪಿಸುವುದು
•    ಉತ್ತಮ ನಗರಾಡಳಿತಕ್ಕೆ ಅಗತ್ಯ ಸಾಮಾಥ್ರ್ಯಭಿವೃದ್ಧಿಪಡಿಸುವುದು
•    ನಗರ ಭಾಗೀದಾರರ ಕೌಶಲ್ಯಾಭಿವೃದ್ಧಿಗೊಳಿಸುವುದು
•    ಎಲ್ಲಾ ಹಂತದ ಅಧಿಕಾರಿ/ಸಿಬ್ಬಂದಿಗಳ ವರ್ತನೆ ಸುಧಾರಿಸುವುದು

ರಾಜ್ಯ ನಗರಾಭಿವೃದ್ಧಿ ಸಂಸ್ಥೆಯ ಪಾತ್ರ 
ನಗರ ನಿರ್ವಹಣೆಯ ಕುರಿತಾಗಿ ಎಲ್ಲಾ ಹಂತದ ಪ್ರಶಿಕ್ಷಣಾರ್ಥಿಗಳಿಗೆ ಅಗತ್ಯವಾದ ಜ್ಞಾನಾರ್ಜನೆಯ ಕಾರ್ಯಕ್ರಮಗಳನ್ನು ರೂಪಿಸುವುದು ಮತ್ತು ಆಯೋಜಿಸುವುದು. ನಗರ ನಿರ್ವಹಣೆಯಲ್ಲಿ ಎದುರಾಗುವ ನಿರಂತರ ಸವಾಲುಗಳನ್ನು ನಿರ್ವಹಿಸುವ ಕೌಶಲ್ಯವನ್ನು ವೃದ್ಧಿಸುವುದು. ನಗರಾಭಿವೃದ್ಧಿ ಪ್ರಕ್ರಿಯೆಯಲ್ಲಿ ತೊಡಗಿರುವ ಎಲ್ಲಾ ಹಂತದ ನಿರ್ವಾಹಕರನ್ನು ಆಯಾ ನಗರಗಳ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಪಾಲ್ಗೊಳ್ಳುವಂತಹ ಮನೋಸ್ಥೈರ್ಯವನ್ನು ಸೃಷ್ಠಿಸುವುದು. ಜನಪ್ರತಿನಿಧಿಗಳು, ಅಧಿಕಾರಿಗಳು, ಕ್ಷೇತ್ರ ಕಾರ್ಯಕರ್ತರೆಲ್ಲರಿಗೂ ಅವರವರ ಹೊಣೆಗಾರಿಕೆ ಕುರಿತು ಕಾಲಕಾಲಕ್ಕೆ ತರಬೇತಿ ಮತ್ತು ಪುನಶ್ಚೇತನ ತರಬೇತಿ ನೀಡುವ ಮೂಲಕ ಅವರ ಸಾಮಾಥ್ರ್ಯಭಿವೃದ್ಧಿಗೆ ವೇದಿಕೆಯಾಗುವುದು. ರಾಜ್ಯದ ವಿವಿಧ ನಗರಗಳ ಪ್ರಾದೇಶಿಕ ಅಗತ್ಯಗಳು ಮತ್ತು ನಿರೀಕ್ಷೆಗಳನುಸಾರ ನಗರ ವಿನ್ಯಾಸ, ಮೂಲ ಸೌಕರ್ಯಗಳ ವಿನ್ಯಾಸ ಮತ್ತು ನಿರ್ವಹಣಾ ಕೌಶಲ್ಯಕ್ಕೆ ಅಗತ್ಯವಿರುವ ಮಾರ್ಗದರ್ಶನ ಒದಗಿಸುವುದು. ರಾಷ್ಟ್ರ ಮತ್ತು ರಾಜ್ಯದ ಆಡಳಿತ ಅಂಶಗಳನ್ನು ಕುರಿತು ಹೊಸ ಹೊಸ ಚಿಂತನೆಗಳನ್ನು ಮತ್ತು ಕಾರ್ಯಯೋಜನೆಗಳನ್ನು ಕಾರ್ಯನೀತಿಗಳನ್ನು ನಿಯಮಬದ್ಧವಾಗಿ ರೂಪಿಸಲು ನೆರವಾಗುವುದು. ನಗರಾಭಿವೃದ್ಧಿ ಕುರಿತು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಚಿಂತನೆಗಳನ್ನು ಅನುಷ್ಟಾನಕ್ಕೆ ತರುವ ಮಾರ್ಗೋಪಾಯಗಳನ್ನು ಸೃಷ್ಠಿಸುವುದು. ರಾಷ್ಟ್ರೀಯ ಮತ್ತು ರಾಜ್ಯದ ಸೂಚಿತ/ಪ್ರಾಯೋಜಿತ ಕಾರ್ಯಕ್ರಮಗಳನ್ನು ಯೋಜಿಸುವುದು ಮತ್ತು ನಿರ್ವಹಿಸುವುದು. ರಾಜ್ಯ ಸರ್ಕಾರದ ನಿರೀಕ್ಷೆಗಳ ಅನುಸಾರ ಸಲಹೆ ಸಹಕಾರಗಳನ್ನು ನೀಡುತ್ತಾ ಸಮನ್ವಯ ಕಾರ್ಯಗಳಲ್ಲಿ ನಿರತವಾಗುವುದು. ರಾಜ್ಯ ಸರ್ಕಾರದ ನಗರಾಭಿವೃದ್ಧಿ ಯೋಜನೆಗಳಿಗನುಸಾರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.